Index   ವಚನ - 609    Search  
 
ನಾನು ಭೃತ್ಯನು ಶಿವನೆ ಒಡೆಯನು. ನಾನು ಶಿಷ್ಯನು ಶಿವನೆ ಶ್ರೀಗುರುವು. ಹೀಗೆಂಬ ಬುದ್ಧಿಯುಳ್ಳವನು ಶಿವಲಿಂಗೈಕ್ಯನು. ಶಿವಾದ್ವೈತಪದದಲ್ಲಿ ಇರುವನಯ್ಯ ಶಾಂತವೀರೇಶ್ವರಾ