Index   ವಚನ - 640    Search  
 
ಶಿವ ತಾನೆ ಲಿಂಗವೆಂಬುದೀಗ ಲಿಂಗದ ಪ್ರಭಾವವೆಂದು ಆಚಾರ್ಯರು ನಿರೂಪಿಸಿರುವರು. ಸ್ಥಾವರ ಜಂಗಮಾತ್ಮಕವಹ ಸಕಲ ಜಗತ್ತು ಎಲ್ಲಿ ಲಯವನೆಯ್ದುವದು ಮತ್ತೆ ಏತರಿಂದ ಗಮ್ಯವಾಗಿರುತ್ತಿಹುದು ಅದನೆ ಲಿಂಗವೆಂದು ಲಿಂಗತತ್ವಪರಾಯಣರು ನಿರೂಪಿಸಿರುವರಯ್ಯ ಶಾಂತವೀರೇಶ್ವರಾ