Index   ವಚನ - 40    Search  
 
ನಿತ್ಯಕರ್ಮ ಕೃತ್ಯದಾಯತ ಬತ್ತಿ ಬತ್ತಿ ಶರೀರದೆಲವು. ತತ್ವವ ಕಾಣದವ ಅತ್ತಣತ್ತಣ ವಸ್ತುವ ಕಾಂಬನೆ? ನಿತ್ಯನವ ಕರ್ಮದೊಳಗೆ ಧರ್ಮವಿದೂರನು. ಕರ್ಮವ ಮಾಡುವುದು ಮಾಟವ. ಸತ್ತಶವಕ್ಕೆ ಅಳಲಾಗಿ ನಿಲ್ಲುವುದೆ ಮರುಳೆ? ನಿತ್ಯದುಃಖ ಶರೀರವೆಂಬುದು ಉತ್ತರದಿ ಕಾಂಬುದರಿವುದು (ಕಾಂಬುದರಿದು?) ಪರಮಪ್ರಭುವೆ.