ಹೆಣ್ಣು ಹೊನ್ನು ಮಣ್ಣು ತ್ರಿವಿಧವು
ಕಣ್ಣೆವೆ ಹಳಚುಮಾತ್ರವು.
ಕಲ್ಪನೆಯ ಪಣ್ಣಿಗೆ ಪ್ರಾಪ್ತವೆ ಬೀಜವೆ?
ಗಿಣ್ಣ[ದ]ಹಾಲ ಕಾಸಿ ಹೆಪ್ಪೆ ಕೊಡುವರೆ ಮರುಳೆ?
ಪುಣ್ಯವು ಸೋಂಕದು ಮೂರಕ್ಕೆ.
ಹುಣ್ಣು ಇಲ್ಲದೆ ಬೇನೆ ಅಹುದೆ
ಪರಮಪ್ರಭುವೆ.
Art
Manuscript
Music
Courtesy:
Transliteration
Heṇṇu honnu maṇṇu trividhavu
kaṇṇeve haḷacumātravu.
Kalpaneya paṇṇige prāptave bījave?
Giṇṇa[da]hāla kāsi heppe koḍuvare maruḷe?
Puṇyavu sōṅkadu mūrakke.
Huṇṇu illade bēne ahude
paramaprabhuve.