Index   ವಚನ - 72    Search  
 
ಬಾಳ್ವ ಭಾಂಡ ಬಾಳ್ವುದಲ್ಲದೆ, ಕೋಳಿಯ ತತ್ತಿನಂತೆ ಹುದುಗು ಹುದುಗಿನೊಳು, ವ್ಯಾಳೆಯಿಲ್ಲವು ಅವಸರವಿಲ್ಲವು. ಏಳು ಹಗಲು ಏಳು ಇರಳು ವಿಷಯಗಳಿಂದಲಿ ತಾಳದು ಭೂಭಾರಂಗಳು, ಚೇಳಿನ ಬಾಳ್ವೆಗಳಂತೆ ಪರಮಪ್ರಭುವೆ.