ಅಳಿವು ಉಳಿವು ತಿಳಿವುದು ಒಂದೆ
ಮಳೆನೀರು ಮಂಜು ಮಾಗಿಯ ಬಿಸಿಲು
ಕಳೆವುದು ತ್ರಿಸಂಧಿಕಾಲವು
ತೊಳಲುವುದು ತನ್ನ ಮನವು ಸ್ತೋಮ ಸ್ತೋಮಕ್ಕೆ
ಎಳನೀರು ತುಂಬಿದ ಕಾಯಿಗೆ,
ಬೆಳೆಬೆಳೆಗೆ ಹೆಪ್ಪ ಕೊಟ್ಟವರಾರು
ಪರಮಪ್ರಭುವೆ.
Art
Manuscript
Music
Courtesy:
Transliteration
Aḷivu uḷivu tiḷivudu onde
maḷenīru man̄ju māgiya bisilu
kaḷevudu trisandhikālavu
toḷaluvudu tanna manavu stōma stōmakke
eḷanīru tumbida kāyige,
beḷebeḷege heppa koṭṭavarāru
paramaprabhuve.