Index   ವಚನ - 34    Search  
 
‘ಅನ್ಯೇಷಾಂ ಸ್ವಾರ್ಥಯಜನಂ ನ ಕುರ್ಯ್ಯಾತ್ತು ಪರಾರ್ತ್ಥಕಂ|| ಮೋಹಲೋಭಾಶ್ಚ ಕುರ್ವಿತರಾಜ್ಞಾ ರಾಷ್ಟ್ರಸ್ಯ ದುಃಸ್ಥಿತಿಃ’ || ಎಂದು ಶಿವಾವರಣಂಗಳಲ್ಲಿ ಅಲ್ಲದೆ ಪೃಥಕ್ ಸ್ಥಾನಸ್ಥರಾದ ವಿಷ್ಣಾದ್ಯನ್ಯ ದೇವತೆಗಳು ಪೂಜೆಯನು ಶುದ್ಧಶೈವನು ಸ್ವಾರ್ಥವಾಗಿಯೂ ಪರಾರ್ಥವಾಗಿಯೂ ಮಾಡಲಾಗದು. ಮರವೆಯ ದೆಸೆಯಿಂದಲೂ ಸಂಸಾರ ಲೋಭದ ದೆಸೆಯಿಂದಲೂ ಮಾಡುವನಾದೊಡೆ ಆ ರಾಜ್ಯಕ್ಕೆಯೂ ಆ ರಾಜಂಗೆಯೂ ಕೇಡಪ್ಪುದು. ಈ ಅರ್ಥಮಂ ವ್ಯಕ್ತಮಂ ಮಾಡಿದಪಂ ಶಾಂತವೀರೇಶ್ವರಾ