Index   ವಚನ - 5    Search  
 
ಜೀವನ ಬಾಗಿಲಲ್ಲಿ ಭ್ರಮೆಯ ತಡೆದು, ಆತ್ಮನ ಬಾಗಿಲಲ್ಲಿ ಪ್ರಕೃತಿಯ ತಡೆದು, ಪರಮನ ಬಾಗಿಲಲ್ಲಿ ಚಿತ್ತವ ತಡೆದು, ಮಿಕ್ಕಾದ ವಾಯುಗಳ ದಿಸೆಯಿಂದ ಇಂದ್ರಿಯಂಗಳ ತಿಳಿದು, ಇಂತೀ ಜೀವಾತ್ಮ ಪರಮ ತ್ರಿವಿಧಗುಣಂಗಳು ತಲೆದೋರದೆ ಕರ್ಮೇಂದ್ರಿಯ ಭಾವೇಂದ್ರಿಯ ಜ್ಞಾನೇಂದ್ರಿಯ ಇಂತೀ ತ್ರಿವಿಧಸ್ವಾನುಭಾವದಲ್ಲಿ ಅಡಗಿ, ಓಂಕಾರದ ಉಲುಹು ನಷ್ಟವಾಗಿ, ಷಡಕ್ಷರ ಪಂಚಾಕ್ಷರ ಮೂಲದ ಉಭಯದ ಮೂಳೆ ಮುರಿದು ಐವತ್ತೊಂದು ಭೇದದ ಸೂತಕದ ಸುಳುಹಡಗಿ, ಹಿಂದುಮುಂದಣ ಎಚ್ಚರಿಕೆ ಸುಮ್ಮಖ ತಿರುಗಲಾಗೆನುತ್ತಿದ್ದೆನು. ಕೂಡಲಸಂಗಮದೇವರಲ್ಲಿ ಬಸವಣ್ಣನ ಮುಂದಣ ಎಚ್ಚರಿಕೆ ಕುಂದದಂತೆ ಉಗ್ಗಡಿಸುತ್ತಿದ್ದೆನು.