Index   ವಚನ - 9    Search  
 
ಭಾವಭ್ರಮೆವಂತರು ಬಾರದಿರಿ, ಜ್ಞಾನಹೀನರು ಬೇಗ ಹೋಗಿ, ತ್ರಿವಿಧ ಮಲಕ್ಕೆ ಕಚ್ಚಿಮುಟ್ಟಿ ಹೊಡೆದಾಡುವರತ್ತಲಿರಿ. ನಿರುತ ಸ್ವಯಾನುಭಾವರು ಬನ್ನಿ, ಪರಬ್ರಹ್ಮಸ್ವರೂಪರು ಬನ್ನಿ, ಏಕಲಿಂಗನಿಷ್ಠಾಪರರು ದೃಢವಂತರು ಬನ್ನಿ, ಸನ್ಮಾರ್ಗ ಸತ್ಕ್ರಿಯಾವಂತರು ಬನ್ನಿ, ಎಂದು ಎನಗೆ ಕೊಟ್ಟ ಕಾಯಕ ಕೂಡಲಸಂಗಮದೇವರಲ್ಲಿ ಬಸವಣ್ಣ.