ಮುಂದೆ ತ್ರಿವಿಧ ಮಲವಿದೆ,
ಆಶಯ ಕುಳಿ ಆಳವಿದೆ,
ಎಡಬಲದಲ್ಲಿ ರೋಷತಾಮಸವೆಂಬ
ಹೊಯಿಲು ಹೊಯಿವುತ್ತಿದೆ,
ಅಹಂಕಾರವೆಂಬ ಮೇಲಣ ಕೊಂಬು
ತಲೆವಳಸಿ ಹೊಯಿವುತ್ತಿದೆ.
ನಿಂದಡಿಗೆ ಪಾದ ಬಲುಹು ನಿಜ ಎಚ್ಚರಿಕೆ,
ತ್ರಿವಿಧದ ಕತ್ತಲೆಯ ಸೋದಿಸಿಕೊಳ್ಳಿ.
ಕಾಲವರು ಮೇಲವರು ಒಳ್ಳೆಯವರು. ಇಂತೀ ಬಾಳೇ ಕ್ಷಣ.
ಶರಣರಡಿವಿಡಿದು ಭೇದಿಸಿ ನಡೆ ಎಂದು ಸಾರುತ್ತಿದ್ದೇನೆ,
ಕೂಡಲಸಂಗಮದೇವಪ್ರಿಯ ಬಸವಣ್ಣ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Munde trividha malavide,
āśaya kuḷi āḷavide,
eḍabaladalli rōṣatāmasavemba
hoyilu hoyivuttide,
ahaṅkāravemba mēlaṇa kombu
talevaḷasi hoyivuttide.
Nindaḍige pāda baluhu nija eccarike,
trividhada kattaleya sōdisikoḷḷi.
Kālavaru mēlavaru oḷḷeyavaru. Intī bāḷē kṣaṇa.
Śaraṇaraḍiviḍidu bhēdisi naḍe endu sāruttiddēne,
kūḍalasaṅgamadēvapriya basavaṇṇa sākṣiyāgi.