Index   ವಚನ - 6    Search  
 
ಅಷ್ಟವಿಧಾರ್ಚನೆ, ಷೋಡಶೋಪಚಾರ ಬಾಹ್ಯಕ್ರೀಯೆಂಬ ಭಾವಭ್ರಮಿತರ ಮಾತ ಕೇಳಲಾಗದು. ಧನವುಳ್ಳಾತನು ಅಷ್ಟಸಂಪದದೈಶ್ವರ್ಯವ ಭೋಗಿಸುವನಲ್ಲದೆ, ಧನಹೀನ ದಾರಿದ್ರನೇನ ಭೋಗಿಸುವನೋ? ಲಿಂಗವೂ ಪ್ರಾಣವೂ ಅವಿರಳಾತ್ಮಕವಾಗಿ ಉತ್ಕೃಷ್ಟವಾಗಿದ್ದಲ್ಲಿ, ಆ ಅಮಳಸೋಂಕು ತುಳುಂಕಿ, ಬಾಹ್ಯಕ್ರೀಯಾಗಿ ಕರಸ್ಥಲಕ್ಕೆ ಬಂದುದೈಸಲ್ಲದೆ, ಅದು ಅಂತರಂಗವಲ್ಲ, ಬಹಿರಂಗವಲ್ಲ ನಮ್ಮ ಉರಿಲಿಂಗದೇವರು.