Index   ವಚನ - 10    Search  
 
ಇಂಬಿನ ಚುಂಬನ ಅಮೃತಾಹಾರ, ಆಲಿಂಗನವೆ ಆಭರಣ, ಸೋಂಕೆ ವಸ್ತ್ರ, ನೋಟವೆ ಕೂಟ, ಒಡನಾಟವೆ ಅಷ್ಟಭೋಗವೆನಗೆ. ಉರಿಲಿಂಗದೇವನ ಕೂಟವೆ ಪರಾಪರ ವಾಙ್ಮನಾತೀತ ಪರಮಸುಖ.