ಕಾಮಾ, ನಿನ್ನ ಬಿಲ್ಲಾಳುತನುವನು,
ಎಸುಗೆಯನು ನೋಡುವೆನು.
ಕೇಳೆಲವೊ, ಕುಸುಮಶರವನು ತೊಡು ನೀನು,
ಏಸು, ನಿನ್ನೆಸುಗೆಯ ನೋಡುವೆನು ಕೇಳಾ.
ಎನಗೂ ಉರಿಲಿಂಗದೇವಗೂ ತೊಟ್ಟೆಸು,
ಎಸಲು ನೀ ಬಿಲ್ಲಾಳಹೆಯಾ ಕಾಮಾ.
Art
Manuscript
Music
Courtesy:
Transliteration
Kāmā, ninna billāḷutanuvanu,
esugeyanu nōḍuvenu.
Kēḷelavo, kusumaśaravanu toḍu nīnu,
ēsu, ninnesugeya nōḍuvenu kēḷā.
Enagū uriliṅgadēvagū toṭṭesu,
esalu nī billāḷaheyā kāmā.