Index   ವಚನ - 23    Search  
 
ಕಾಮಿನಿ ಕಾಮನಿಗೆ ಎರಡು ಗುರಿಯೆಂದು ಸರಳೆಸುಗೆಯ ಮಾಡುವೆ. ಕಾಮನಲ್ಲೊ [ಅ]ಲ್ಲೊ ಬಿಲ್ಲಾಳೆ! ಎಸಲು ಎರಡೊಂದಪ್ಪುದು ಗಡ, ಕಾಮಾ ಎನಗೆ ಉರಿಲಿಂಗದೇವಗೆ ತೊಟ್ಟೆಸು, ಎರಡೊಂದಾದಡೆ ಬಿಲ್ಲಾಳಹೆ, ಎಸೆಯೊ ನೀನು.