Index   ವಚನ - 24    Search  
 
ಕಾಯಕ್ಕೆ ಕಾಯವಾಗಿ ಪ್ರಾಣಕ್ಕೆ ಪ್ರಾಣವಾಗಿ ಮನಕ್ಕೆ ಮನವಾಗಿ ನೆರೆವ ನೋಡೆಲಗವ್ವಾ. ನಲ್ಲನ ಬೇಟದ ಕೂಟದ ಸುಖವನೇನೆಂದು ಬಣ್ಣಿಪೆ, ಮಹಾಸುಖವ! ನಲ್ಲನ ನೋಟದ ಕೂಟದನುವನೇನೆಂದುಪಮಿಸುವೆ, ಮಹಾಘನವ! ತಾನು ತಾನೆಂದು ವಿವರಿಸಬಾರದಂತೆ ನೆರೆದನು ನೋಡಾ, ಉರಿಲಿಂಗದೇವನು.