Index   ವಚನ - 43    Search  
 
ಲಿಂಗ ಕರಸ್ಥಲಕ್ಕೆ ಬಂದ ಮತ್ತೆ ಕಂಗಳು ತುಂಬಿವರಿಯದಿರ್ದಡೆ, ಆ ಲಿಂಗಪೂಜೆಯಾಕೆ? ಲಿಂಗ ಜಿಹ್ವೆಯಲ್ಲಿ ನೆನೆವಾಗ ಅಂಗವ ಮರೆಯದಿರ್ದಡೆ ಆ ಲಿಂಗದ ನೆನಹದೇಕೆ? ಲಿಂಗವಾರ್ತೆಯ ಕಿವಿತುಂಬ ಕೇಳಿ ಸರ್ವಾಂಗ ಝೊಂಪಿಸಿ ಮನಮಗ್ನವಾಗಿ ಇರದಿರ್ದಡೆ, ಉರಿಲಿಂಗತಂದೆಯ ಸಿರಿಯ ನೆನೆಯಲೇಕೆ?