Index   ವಚನ - 1    Search  
 
ಕೊಲಲಾರದೆಯೆ ಹಿಂದೆ ಬಂದುದನರಿದುದಿಲ್ಲಾಗಿ, ಮುಂದೆ ಬಾಹದಕೆ ನೀ ಚಿಂತಿಸಲೇಕೆ? ಇಂದಿಗೆಂಬುದು ಲಿಂಗದೊಲವು. ಶಿವಶರಣಂಗೆ ನಾಳೆ ಇಂದು ಎಂಬ ಅಭಾವವಿಲ್ಲ. ಕಡುಗಲಿಯಾದ ಶರಣ ರಕ್ಷೆಯ ಕಾಯವೇನಯ್ಯಾ, ಅಖಂಡ ಮಂಡಲೇಶ್ವರಾ.