ಆನು ಭಕ್ತ, ಆನು ಶರಣ,
ಆನು ಲಿಂಗೈಕ್ಯನೆಂದೊಡೆ
ಲಿಂಗವು ನಗದೆ?
ಪಂಚೇಂದ್ರಿಯಂಗಳು ನಗವೆ?
ಅರಿಷಡ್ವರ್ಗಂಗಳು ನಗವೆ?
ಎನ್ನ ತನುವಿನೊಳಗಣ ಸತ್ವರಜತಮೋ
ಗುಣಂಗಳು ನಗವೆ?
ಹೇಳಯ್ಯಾ! ಉಳಿಯುಮೇಶ್ವರಾ?
Art
Manuscript
Music
Courtesy:
Transliteration
Ānu bhakta, ānu śaraṇa,
ānu liṅgaikyanendoḍe
liṅgavu nagade?
Pan̄cēndriyaṅgaḷu nagave?
Ariṣaḍvargaṅgaḷu nagave?
Enna tanuvinoḷagaṇa satvarajatamō
guṇaṅgaḷu nagave?
Hēḷayyā! Uḷiyumēśvarā?