Index   ವಚನ - 7    Search  
 
ಒಂದು ಯೋನಿಯಲ್ಲಿ ಬಂದ ದುಃಖವ ನಾನು ಎಂದೆಂದಿಗೂ ಕಳೆಯಲಾರೆ ಇನ್ನು ಎಂಬತ್ತುನಾಲ್ಕುಲಕ್ಷವೆಂದರೆ, ನಾನಿನ್ನೇವೆನಯ್ಯಾ? ಒಂದುವನರಿಯದ ಶಿಶು ನಾ ನೊಂದೆನಯ್ಯಾ! ಎನ್ನ ಕಂದ ಬಾ ಎಂದು, ಕಂಬನಿಯ ತೊಡೆದೆತ್ತಿ, ಆನಂದದಿಂದ ಕಣ್ದೆರೆ ಉಳಿಯುಮೇಶ್ವರಾ.