Index   ವಚನ - 8    Search  
 
ತೊರೆಯ ಉದಕವ ಕೊಂಡು ತರಿದು ಸೊಪ್ಪನೆ ಮೆದ್ದು ಇರವು ಲಿಂಗಗೂಡಾಗಿ ಇರಬೇಕು. ಕೆಱೆಯ ನೀರನೆ ಮಿಂದು ಅರುವೆಗಪ್ಪಡ ಉಟ್ಟು ಇರವು ಲಿಂಗಗೂಡಾಗಿ ಇರಬೇಕು. ಅರುವೆಲ್ಲವು ಮುಚ್ಚಿ ಹೆರರಿಗಾಸೆಯ ಮಾಡಿಸಿ ಎನ್ನನಿರಿದಿರಿದು ಸುಡುವರೆ ಉಳಿಯುಮೇಶ್ವರಾ.