Index   ವಚನ - 1    Search  
 
ಲೋಕಾಂತವಳಿದು ಏಕಾಂತ ಉಳಿದಲ್ಲಿ ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ. ಎನ್ನ ನುಡಿ ಆತನ ಕಿವಿಗೆ ಇನಿಯದಾಯಿತ್ತು ಆತನ ನುಡಿ ಎನ್ನ ಕಿವಿಗೆ ಇನಿಯದಾಯಿತ್ತು. ಇಬ್ಬರ ನುಡಿಯೂ ಒಂದೇಯಾಗಿ ನಿಶ್ಯಬ್ದ ವೇಧಿಸಿತ್ತು. ಈ ಸುಖದ ಸೋಂಕಿನ ಪುಣ್ಯದ ಫಲದಿಂದ ಅನುಪಮಚರಿತ್ರ ಪ್ರಭುದೇವರ ನಿಲುವ ಕಂಡು, ನಾನು ಧನ್ಯನಾದೆನು ಕಾಣಾ, ಏಕಾಂತ ವೀರಸೊಡ್ಡೊಳಾ.