Index   ವಚನ - 1    Search  
 
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನಡೆವುದು. ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನುಡಿವುದು. ನಿಂದೆ ಬೇಡ, ಪರನಿಂದೆ ಬೇಡ. ಅವರಾದಡೇನು? ಹೋದಡೇನು? ತಾನು ಸುಖಿಯಾದಡೆ ಸಾಕು. ಏಕೋರಾಮೇಶ್ವರಲಿಂಗದ ನಿಜವನರಿಯದಡೆ, ಬೀಗಿ ಬೆಳೆದ ರಾಜಾನ್ನದ ತೆನೆಯಂತಿರಬೇಕು, ಶರಣ.