ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ.
ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ.
ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು
ನಡೆದೆಹೆನೆಂಬುದೆ ಪರಪಾಕದ ಪಾಕುಳ.
ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು,
ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ,
ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ.
ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು-
ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು,
ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ,
ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ
ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
An'yara dravyava apaharisikoṇḍalli adu tanage an'yadaiva.
Tanna krīyalladalli mana muṭṭi nenedāgave adu an'yāhāra.
Idira upacariyakke nānondu vratava hiḍidu
naḍedehenembude parapākada pākuḷa.
Intivaralli mana hēsi, tanu karagi, pakṣapātavemba pātakava biṭṭu,
niścayadalli ninda vratāṅgaliṅgi matryara suguṇa durguṇavanolla,
nityānityava muṭṭi matryara karkaśavanolla. Bhaktiyalli tiḷidu, jñānadalli nindu, vairāgyadalli salesandu-
intī trividhadalli nidhānisi nindu,
krīyē ghaṭavāgi, ācāravē ātmavāgi,
anusaraṇeyillada niścayavē nijatatvakūṭavāgi
toḷagi beḷaguttirabēku, ēlēśvaraliṅgadalli.