Index   ವಚನ - 13    Search  
 
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ, ಅರುವತ್ತಾರು ವ್ರತಂಗಳಲ್ಲಿ ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ. ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ. ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು, ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು. ಭಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಭಿನ್ನದಠಾವ ಹೇಳಾ, ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ.