Index   ವಚನ - 14    Search  
 
ಒಡೆಯರು ಭಕ್ತರಲ್ಲಿ ಕೃಷಿಯಿಲ್ಲದೆ ಬೇಡಿ ತಂದು, ತನ್ನ ಮಡದಿ ಮಕ್ಕಳ ಹೊರೆದು, ಮಿಕ್ಕಾದುದ ಒಡೆಯರಿಗಿಕ್ಕಿಹೆನೆಂಬ ಅಡುಗೂಲಿಕಾರನ ಗಂಜಿಗುಡಿಹಿಯ ಭಕ್ತಿ ತನ್ನ ಸಂಸಾರದ ಅಡಿಗೆಯೊಳಗೆ ಅಡಗಿತ್ತು, ಇದು ಬೆದಕಿದಡೆ ಹುರುಳಿಲ್ಲ. ನನ್ನಿಯೆತ್ತಿಗೆ ಎನ್ನ ಮಣ್ಣೆತ್ತು ಘನವೆನಬೇಕು, ಅದು ಭಕ್ತಿಪಕ್ಷದ ಓಸರ. ಬಿಡಲಿಲ್ಲ, ಅರಿದು ಹಿಡಿಯಲಿಲ್ಲ. ಆ ಅಂಗವ, ಒಡಗೂಡುವ ಶರಣರು ನೀವೆ ಬಲ್ಲಿರಿ. ಎನಗದು ಸಂಗವಲ್ಲ ಏಲೇಶ್ವರಲಿಂಗಕ್ಕೆ.