Index   ವಚನ - 37    Search  
 
ದೃಷ್ಟಿ ನಟ್ಟು ಚಿತ್ತವೊಪ್ಪಿದಲ್ಲಿ ಬೇರುಂಟೆ ಹಾದರವೆಂಬುದು? ಆ ಗುಣವ ಕಂಡು ಮನಶಂಕೆದೋರಿದಲ್ಲಿ ನಿಂದೆಗೆ ಬೇರೊಂದೊಡಲುಂಟೆ? ಇಂತೀ ಉಭಯಭಾವ ತಲೆದೋರಿದಲ್ಲಿ ಅಂಗಕ್ಕೆ ಆಚಾರವಿಲ್ಲ, ಆತ್ಮಂಗೆ ವ್ರತವಿಲ್ಲ. ಇಂತೀ ಸಂದೇಹದಲ್ಲಿ ಸಾವವ ಇಹಪರ ಉಭಯಕ್ಕೆ ಹೊರಗು. ಏಲೇಶ್ವರಲಿಂಗ ಅವರಿಗೆ ಮುನ್ನವೆ ಒಳಗಲ್ಲ.