ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗದ ಎನ್ನದು,
ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ.
ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ,
ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ.
ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಶದ ಘಾತಕ.
ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ,
ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ,
ಸಮಭಾವವಂತನಾಗಿ ಸಮಪಥ ಸತ್ಪಥನಾಗಿ, ಇಪ್ಪಾತನ
ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ.
ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧ ದತ್ತಳವ.
ಇದಕ್ಕೆ ಎನಗೆ ನಿಶ್ಚಯ.
ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ
ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
Art
Manuscript
Music
Courtesy:
Transliteration
Nēmakke tappada guru ennava, śīlakke tappada liṅgada ennadu,
vratācārakke tappada jaṅgama enna manōmūrti.
Hīgallade, krīge nillada guru āta bhavabhāri,
ācārakke sallada liṅga adu pāṣāṇa.
Ā vratada ācārada deseya dūṣaṇe jaṅgamavēśada ghātaka.
Intī enna vratakke, enna ācārakke, enna bhāvakke,
enna samakrīvantanāgi, samaśīlavantanāgi,
samabhāvavantanāgi samapatha satpathanāgi, ippātana Enna trividhakke oḍeya, ittaḷava.
Ī guṇakke oppade trividhada kaccāṭakke macci hōruvava, trividha dattaḷava.
Idakke enage niścaya.
Enna vratācārakke anukūlavāgada ēlēśvaraliṅgavāyittādaḍū
ihaparakke horagendu ḍaṅguravikkide.