ಭಕ್ತರಾಶ್ರಯಕ್ಕೆ ಭಕ್ತರು ಹೋಹಲ್ಲಿ
ಅವರ ನಿತ್ಯಕೃತ್ಯವ ವಿಚಾರಿಸಿ, ತಮ್ಮ ನೇಮಕ್ಕೆ ಅವರ ಭಾವವೊಂದಾದಲ್ಲಿ
ತಮ್ಮ ಕೃತ್ಯದ ಒಡೆಯರು ಮುಂತಾಗಿ ಹೋಗಬೇಕಲ್ಲದೆ,
ಆ ಭಕ್ತರ ಆಶ್ರಯಕ್ಕೆ ಒಡೆಯರ ಕಟ್ಟಳೆ ಉಂಟೆಂದು,
ತಮ್ಮ ಒಡೆಯರ ಬಿಟ್ಟು ತುಡುಗುಣಿತನದಲ್ಲಿ ಉಂಬವಂಗೆ-
ಇಂತಿ ಬಿಡುಮುಡಿಯ [ಭ]ಂಡರನೊಪ್ಪ ಏಲೇಶ್ವರಲಿಂಗವು.