Index   ವಚನ - 49    Search  
 
ಭಕ್ತಿಯಿಂದ ನಡೆದೆಹೆನಂಬಲ್ಲಿ ವ್ರತಲಕ್ಷವುಂಟು, ಅಲಕ್ಷವುಂಟು. ಮಿಕ್ಕಾದ ಸರ್ವಗುಣಂಗಳಲ್ಲಿ ಹೊತ್ತು ಹೋರಿಹೆನೆಂದಡೆ ಭಕ್ತಿ ಲಕ್ಷಣ. ವಿಶ್ವಮಯಸತ್ವಕ್ಕೆ ತಕ್ಕ ಸಾಮರ್ಥ್ಯದಲ್ಲಿ ಚಿತ್ತವೊಪ್ಪಿ ನಡೆವ ಕೃತ್ಯವ ಹೊತ್ತು, ಆ ಕೃತ್ಯ ತಪ್ಪದೆ ನಿಶ್ಚಯವಾಗಿರಬೇಕು. ಇದು ಏಲೇಶ್ವರಲಿಂಗಕ್ಕೆ ವ್ರತದ ಗುತ್ತಗೆಯ ನೇಮ.