Index   ವಚನ - 66    Search  
 
ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ, ಅಪ್ಪುಲವಣ ಮೃತ್ತಿಕೆಲವಣ ಸ್ಥಾವರಲವಣ-ಇಂತೀ ತ್ರಿವಿಧಲವಣಂಗಳಲ್ಲಿ ಅಧಮ ವಿಶೇಷಂಗಳನರಿದು, ಹಿಡಿವುದ ಹಿಡಿದು ಬಿಡುವುದ ಬಿಟ್ಟು, ಅಂಗದ ಕ್ರೀ, ಮನ, ಅಂಗೀಕರಿಸುವ ವರ್ತನ- ಈ ತ್ರಿವಿಧಕ್ಕೆ ಲಿಂಗ ಸುಯಿದಾನಿಯಾಗಿರಬೇಕು ಏಲೇಶ್ವರಲಿಂಗಕ್ಕೆ.