Index   ವಚನ - 10    Search  
 
ಮೂರಡಿ ಮಣ್ಣಿಗೆ ಆರು ಹೊನ್ನ ತೆತ್ತು, ಮೀರಿ ಹದಿಕೆಯ ಬೇಡೆನೆಂದು, ಈ ಗ್ರಾಮದವರ ಮುಂದಿಟ್ಟು ಮೀರಲಿಲ್ಲಾಯೆಂದು ಪಟ್ಟೆಯ ಕೊಟ್ಟು, ಮತ್ತೂರು ಗೂಡಿ ಹದಿಕೆಯ ಬೇಡಿದಡೆ, ನಾ ಕೊಡಲಿಲ್ಲ. ನೀ ಕೊಟ್ಟ ಪಟ್ಟೆ ನಮ್ಮ ನಟ್ಟನಡುಮನೆಯ ಐದುಕಾಲ ನೆಲಹಿನಲ್ಲಿ ಕಟ್ಟಿಯದೆ ಕೋ! ನೀ ತಪ್ಪಿದಡೆ ನಿನಗೆ ಹೇಳುವ ಒಡೆಯರುಂಟೆ? ನಾನೊಕ್ಕಲು ನೀನೊಡೆಯ. ಮೀರಿ ಕೊಂಡಿಹೆನೆಂದಡೆ ಮುನ್ನವೇ ಸಿದ್ಧಾಯ ಸೆರೆಗೆ ನಾನೊಳಗು. ಗುತ್ತಿಗೆಕಾರಂಗೆ ಮತ್ತೆ ಕುಳವುಂಟೆ? ಇನ್ನು ಕೊಟ್ಟೆನಾದೊಡೆ ಎನ್ನ ಹಟ್ಟಿಕೊಟ್ಟಿಗೆಯೊಡೆಯ ಕಾಮಭೀಮ ಜೀವಧನದಾಣೆ.