ಅಂಗದ ರೋಮ ಮುಮ್ಮೊನೆದೋರಿ ಮೊಳೆಗಾಣದಂತೆ,
ದಶಾಂಗುಲಿಯ ನಖ ಪ್ರತಿರೂಪುದೋರದಂತೆ.
ಇದು ಶರೀರ ಚಿತ್ರಾಂಗಿಯ ಕಾಯದ ನಿರಿಗೆಯ ತೆರ.
ಹೊರಗಣ ಕ್ರೀ, ಆತ್ಮನೊಳಗಣ ಜ್ಞಾನ
ಇಂತೀ ಉಭಯವನರಿದು
ಕಾಯಕವನೊಡಗೂಡಿ ಮಾಡಬೇಕು.
ಹದಿನೆಂಟು ಕಾಯಕದೊಳಗಾದ,
ನಾಲ್ಕು ಕಾಯಕ ಹೊರಗಾದ
ಮೂರು ಕಾಯಕ ಮುಂತಾದ
ಕಾಯಕದಂದವ ತಿಳಿದು
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವನೊಡಗೂಡಬೇಕು.