ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?
ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ ?
ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ.
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ?
ಎತ್ತಲಾರದಡೆ ಸತ್ತ ಕುನ್ನಿನಾಯ ಬಾಲವ
ನಾಲಗೆ ಮುರುಟಿರೋ
ಸದ್ಗುರುಸಂಗ ನಿರಂಗಲಿಂಗದಲ್ಲಿ.
Art
Manuscript
Music
Courtesy:
Transliteration
Kaiyalli kannaḍiyiralu tanna tā nōḍabārade?
Liṅgajaṅgamada prasādakke tappidalli kollabārade?
Kondaḍe muktiyillavembavara bāyalli
paḍ'̔ihārana pādarakṣeyanikkuve.
Muṇḍigeyanettiro bhraṣṭa bhavigaḷirā?
Ettalāradaḍe satta kunnināya bālava
nālage muruṭirō
sadgurusaṅga niraṅgaliṅgadalli.