Index   ವಚನ - 2    Search  
 
ಎನ್ನ ಕನ್ನಗತ್ತಿಯ ಒಡೆಯಂಗೆ ಆಡನರಿದೆ, ಕೋಡಗವ ಬಲಿಯನಿಕ್ಕಿದೆ, ಎನ್ನ ಮಾತಾಪಿತರ ಮೀಸಲನಿಕ್ಕಿದೆ. ಇಷ್ಟಕ್ಕೆ ಎನಗೆ ಕನ್ನ ಕೂರ್ತು ಬಾರದಿದ್ದಡೆ ಮಾರನವೈರಿ ಮಾರೇಶ್ವರನಿಲ್ಲಾ ಎಂದೆ.