ಮಹಾ ಅಂಬುಧಿಯಲ್ಲಿ ಹರಿವ ಮತ್ಸ್ಯಕ್ಕೆ
ನಾನೊಂದು ಬಗೆಯ ಕಂಡೆ.
ಅದು ಅಡಗುವ ಮಡುವ ನೋಡಿ
ತ್ರಿವಿಧದ ಸೊಕ್ಕು ತಂದು
ಆ ಮಡುವಿನುದಕದಲ್ಲಿ ಒಡಗೂಡಿ ಕದಡೆ
ಆ ಸೊಕ್ಕು ಮತ್ಸ್ಯವ ಮುಟ್ಟಿದುದಿಲ್ಲ.
ಅದೆಂತೆಂದಡೆ:
ಅದರ ನಾಸಿಕದ ಉಸುರು ಸೂಸಲಿಲ್ಲ.
ಕಂಗಳ ದೃಷ್ಟಿ ಅನಿರಸಂಗೊಳಲಿಲ್ಲ.
ಆ ಮತ್ಸ್ಯದಂಗದ ಕವಚ ದುಸ್ಸಂಗದ
ನೀರ ಮುಟ್ಟದಾಗಿ
ಅದು ನಿರಂಗದ ಮತ್ಸ್ಯ.
ಸುಸಂಗದ ಹೊಳೆಯಲ್ಲಿ ನಿರತಿಶಯದಿಂದ ತಿರುಗುತ್ತದೇಕೊ?
ಕದಂಬಲಿಂಗನ ಬಲೆಯ ಹೊಲಬ ಕಂಡು.