Index   ವಚನ - 4    Search  
 
ಜಲ ನೆಲ ಅನಲ ಅನಿಲ ಮಿಕ್ಕಾದ ದೃಷ್ಟಂಗಳೆಲ್ಲವನೂ ನಿರೀಕ್ಷಿಸಿ ಸಾಧಿಸಿಕೊಂಡು ಶ್ರುತ ದೃಷ್ಟ ಅನುಮಾನಂಗಳಲ್ಲಿ ತಿಳಿದು, ಹಿಂದಣ ಮುಂದಣ ಸಂದೇಹವ ಹರಿದು ಮುಟ್ಟೂದು ಘಟಕ್ರಿಯಾಭೇದ ಮನಕ್ಕೆ ಮನೋಹರ ಸಂಕೇಶ್ವರ ಲಿಂಗವನರಿವುದಕ್ಕೆ.