Index   ವಚನ - 5    Search  
 
ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು. ತನಗಲ್ಲದುದ ಕೈ ಮುಟ್ಟಿದಲ್ಲಿ ಅಲ್ಲಿಯೇ ತೆಗೆವೆನು. ತನಗಲ್ಲದುದ ಕಿವಿ ಕೇಳಿದಲ್ಲಿ ಅಲ್ಲಿಯೇ ಗುಂಟಿ ಬಲಿವೆನು ತನಗಲ್ಲದುದ ನಾಸಿಕ ವಾಸಿಸಿದಲ್ಲಿ ಅಲ್ಲಿಯೇ ದಸಿಯ ದಕ್ಕನೇರಿಸುವೆನು. ದೃಷ್ಟಿ ಅನುತಪ್ಪಿ ನೋಡಿದಲ್ಲಿ ಅಲ್ಲಿಯೇ ಕಿತ್ತಿಡುವೆನು. ಚಿತ್ತ ಅನುತಪ್ಪಿ ಮತ್ತೊಂದ ನೆನೆದಡೆ, ಆತ್ಮನನಲ್ಲಿಯೆ ಕಿತ್ತು ಹಾಕುವೆನು. ಇದಕ್ಕೆ ನೀವೇ ಸಾಕ್ಷಿ, ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು.