Index   ವಚನ - 2    Search  
 
ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು. ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವದು. ಕುಟಿಲ ಕವಳವನೊಲ್ಲದು. ಮದ್ದು ಮರುಡೆ ಬೆಳುವೆಯ ಗುಣ ಗಾಳಿಯ ಲೆಕ್ಕಿಸದು. ಇಂತೀ ಅರಿಗುರಿಯ ಕೋಡ ಕಿತ್ತು ಒಂದ ಹಿಂದಕ್ಕಿರಿಸಿ, ಒಂದ ಹಿಡಿದಾಡ ಬಂದೆ. ಆ ಕೋಡಿನಲ್ಲಿ ನಾನಾ ವರ್ಣದ ಶಬ್ದದ ಉಲುಹು. ಇಂತಿವೆಲ್ಲವ ಒಂದುಂಗುರದಲ್ಲಿ ಸೇರಿಸಿ ಅಂಗುಲಿಗಳಲ್ಲಿ ಮುಟ್ಟಿಯಾಡುತ್ತ ಬಂದೆ, ಮೇಖಲೇಶ್ವರಲಿಂಗದಲ್ಲಿ ಲೀಯವಾದ ಶರಣರ ನೋಡಿಹೆನೆಂದು.