Index   ವಚನ - 1    Search  
 
ಹೇಳಿಹೆ ಕೇಳಾ ಬಸವಣ್ಣಾ, ನಿನಗೊಂದು ಮಾತಿನ ಹೊಲ್ಲೆಹ ಹೊದ್ದಿಹಿತೆಂದು ಶಿವರಸವೆಂಬ ಮಡುವಿನಲ್ಲಿ ಒಗೆದೆ ನಾನು. ಈರೇಳು ಭುವನವರಿಯಲು ಒಂದು ಲಚ್ಚಣವನಿಕ್ಕಿದೆ, ನಾನು. ಕಲ್ಲಯ್ಯದೇವರು ಸಾಕ್ಷಿಯಾಗಿ ಆಚಾರವನೆ ಗಳಿಸಿದೆ, ಅನಾಚಾರವನೆ ಘಟ್ಟಿಸಿದೆ ಕಾಣಾ ಸಂಗನಬಸವಣ್ಣಾ.