Index   ವಚನ - 2    Search  
 
ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ. ಮಣ್ಣ ಮಡಕೆ ಒಕ್ಕಲಿಗನಲ್ಲಿ, ಚಿನ್ನದ ಮಡಕೆ ಅರಮನೆಯಲ್ಲಿ. ಅರಮನೆ ಗುರುಮನೆ ಹಿರಿದಾದ ಕಾರಣ- ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!