Index   ವಚನ - 10    Search  
 
ಹಲವು ಗಿರಿಗಳ ತಪ್ಪಲಲ್ಲಿ ಮಲೆಯ ಮಂದಿರಗಳಲ್ಲಿ ಬಳನೆ ಬಳನೆ ಮೇದು ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ. ಆ ಪಶುವಿಂಗೆ ಕಟ್ಟು ಗೊತ್ತಿಲ್ಲ, ಕಾವ ಕಟ್ಟಿಗೆ ಒಳಗಲ್ಲ. ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು, ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ, ಕಾಲಕರ್ಮವಿರಹಿತ ತ್ರಿಪುರಾಂಕ ಲಿಂಗದೊಳಗಾದವಂಗೆ.