Index   ವಚನ - 9    Search  
 
ಗಂಡನಿಂದ ಹೆಂಡತಿ ಮೊದಲು ಹುಟ್ಟಿದಳು, ಆ ಗಂಡನಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ. ಗುರುವಿನಿಂದ ಈ ಶಿಷ್ಯ ಅರಿವುಳ್ಳವನಾದರೆ ಭೃತ್ಯನಲ್ಲದೆ ಕರ್ತನಲ್ಲವಯ್ಯ. ಕುದುರೆಯ ಹಿಡಿವಂತ ಡಾಣಕ ರಾವುತಿಕೆಯ ಮಾಡಿದರೊಪ್ಪುವರೆ ? ಆಳಾಗಿದ್ದವನು ಅರಸಾಗಿದ್ದರೊಪ್ಪುವರೆ ? ತಂದೆಗೆ ಮಗ ದೊಡ್ಡವನಾಗಬಲ್ಲನೆ ? ಇದು ಕಾರಣ ಶಿಷ್ಯರಿಗೆ ಭಯಭಕ್ತಿ ಕಿಂಕುರ್ವಾಣವಿರಬೇಕು. ಇಲ್ಲದಿರ್ದಡೆ ಅವ ಶಿಷ್ಯನಲ್ಲ, ಶಿವಭಕ್ತನಲ್ಲ. ಅವ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.