Index   ವಚನ - 29    Search  
 
ಭವಿತನಕ್ಕೆ ಹೇಸಿ ಭಕ್ತನಾಗಿ ಭವ ಸಲ್ಲದೆ ಮತ್ತೆಯೂ ಭವಿಯ ಮನೆಯ ಹೊಕ್ಕು ಹೋಗಿ ಉಂಡನಾದರೆ ತಿಂಗಳು ಸತ್ತ ಕತ್ತೆಯ ಮಾಂಸವ ತುತ್ತು ತುತ್ತಿಂಗೆ ಗದ್ಯಾಣ ತೂಕವ ತೂಗಿ ತಿಂದ ಸಮಾನ. ಅವನನು ಭಕ್ತನೆನಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.