Index   ವಚನ - 34    Search  
 
ಕಾಲ ಕಾಮನ ಗೆಲುವುದಕ್ಕೆ ಉಪಾಯವಿದೇನೆಂದು ಆಲೋಚನೆಯ ಮಾಡುವೆಯ ಮನವೆ? ನರಿ ನಾಯ ಜಗಳಕ್ಕೆ ಆನೆಯ ಪವುಜನದಕಿಕ್ಕುವರೆ ಮನವೆ? ಸುಜ್ಞಾನವೆಂಬ ಆನೆಯನೇರಿ ಅಜ್ಞಾನವೆಂಬ ನಾಯಿಗಳಿಗೆ ಅಂಜದಿರು ಮನವೆ, ಅಳುಕದಿರು ಮನವೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.