Index   ವಚನ - 39    Search  
 
ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ, ಗಂಡಂಗಯಿದರೆಡೆಯ ತೋರುವಳೆ ಹೆಂಡತಿ? ಆ ಕಳ್ಮಂಡ ಷಂಡ ಸವುಂಡ ಅಂಡರಂತೆ ಕಂಡಕಂಡುದ ಪೂಜಿಸುವ ಭಂಡ ಮುಂಡೆ ಮೂಕೊರೆಯನ ಮುಖವ ನೋಡಲಾಗದು, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.