Index   ವಚನ - 41    Search  
 
ಮಾಳಿಗೆಯ ಮಣ್ಣು ಮಂಟಪಕ್ಕೆ ಸರಿಯೆ? ಆಳಿಂಗೆ ಅರಸು ಸರಿಯೆ? ಸೂಳೆಗೆ ಪತಿವ್ರತೆ ಸರಿಯೆ? ನಿವಾಳಿಸಿ ಬಿಟ್ಟ ವಾಳಿಮಾನವರಿಗೆ ಮೇಳವಾಡಿ ಮುಕರಿದರೆ ಭಕ್ತಿಬೆಳವಿಗೆ ಸರಿಯೆ? ಅಗ್ಗ ಕೂಗಳಿಗೂಳರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.