Index   ವಚನ - 48    Search  
 
ಸಟ್ಟುಗ ಸವಿಯ ಬಲ್ಲುದೆ? ಅಟ್ಟ ಮಡಕೆ ಉಣ್ಣಬಲ್ಲುದೆ? ಕನಿಷ್ಠ ಹೀನ ಲಿಂಗದ ಕಟ್ಟಳೆಗೆ ಬರಬಲ್ಲನೆ? ಕರಕಷ್ಟ ಹೀನರಿರಾ ಸುಮ್ಮನಿರಿರೊ. ಸೂಳೆಯ ಮಕ್ಕಳಿರ ಕಟ್ಟಳೆಗೆ ಬರದೆ, ಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ ಆವನಿದ್ದಾತನೆ ಅಚ್ಚ ಭಕ್ತನೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.