Index   ವಚನ - 49    Search  
 
ನೀರಮಡಿಯ ಕಟ್ಟಿ ಬಯಲಿಗೆ ಬಲೆಯ ಬೀಸಬಹುದೆ? ಏರಿಗೆ ಅರಗ ತೋರಿ ಗಾಳಿಗೆ ಸೊಡರ ಹಿಡಿಯಬಹುದೆ? ಮಳಲಗೋಡೆಯನಿಕ್ಕಿ ಮಂಜಿನಮನೆಯ ಕಟ್ಟಿದರೆ ಅದು ಅಸ್ಥಿರವಾಗುದಲ್ಲದೆ ಸ್ಥಿರವಾಗಬಲ್ಲುದೆ? ಹಲವು ಮುಖದಲ್ಲಿ ಜಿನುಗುವ ಭವಭಾರಿ ಮನುಜರಿಗೆ ಶಿವಾಚಾರ ಅಳವಡದು ನೋಡಾ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.