Index   ವಚನ - 68    Search  
 
ಇದ್ದೂರಲ್ಲಿ ಗುರುವಿದ್ದು ದರುಶನ ಸ್ಪರುಶನವಿಲ್ಲದೆ ದೂರದಲೆ ನೆನದುಕೊಂಡಿದ್ದೇನೆಂಬವಿಚಾರಿ ಹಾದರಗಿತ್ತಿಯಂತೆ ಹೊಲೆಯರು ನೀವು ಕೇಳಿರೊ. ಬೇರೂರಿಗೆ ಹೋಗಿ ಸತಿಯರ ನೆನೆದರೆ ಇರವೆ ಮಾಡಿದ ಹಾಂಗೆ ಆಗುವುದೆ? ಇಲ್ಲ. ಅದೇನು ಕಾರಣವೆಂದರೆ, ಗುರುಲಿಂಗಜಂಗಮದ ಪಾದಸೇವೆಯ ನೆರೆನಂಬಿ ಹೆರೆಹಿಂಗದೆ ಮಾಡುವುದೆ ಮಾಟಕೂಟ ಭಕ್ತಿಮುಕ್ತಿ. ಇಂತಲ್ಲದೆ ಉಳಿದಾದ ಮಾಟಕೂಟವೆಲ್ಲ ಬಗುಳಾಟ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.