ಒಂದು ಮನೆಯೊಳಗೆ ಗಂಡಗೊಬ್ಬ ಗುರು,
ಹೆಂಡತಿಗೊಬ್ಬ ಗುರು, ಮಕ್ಕಳಿಗೊಬ್ಬ ಗುರು,
ತಂದೆಗೊಬ್ಬ ಗುರು, ತಾಯಿಗೊಬ್ಬ ಗುರು.
ಈ ರೀತಿಯಲ್ಲು ಗುರುಭೇದವ ಮಾಡಿಕೊಂಡು
ನಾವು ಭಕ್ತರುಯೆಂದು ಬೆರೆವರು.
ಇಂಥ ನೀಚ ಹೊಲೆಯರಿಗೆ ಭಕ್ತಿಮುಕ್ತಿ ಎಲ್ಲಿಯದೊ?
ಏಕೋ ಗುರುವೊಬ್ಬನಲ್ಲದೆ ಎರಡುಂಟೆ?
ಇದಲ್ಲದೆ ಗುರುಭೇದವ ಮಾಡಿದ
ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.